ಎಲುಬು ಶಾಸ್ತ್ರ  

ಮೂಳೆಗಳ, ಎಲುಗಟ್ಟಿನ (ಸ್ಕೆಲಿಟನ್), ಒಟ್ಟಾರೆ ಇಲ್ಲವೆ ಬಿಡಿ ಬಿಡಿಯಾಗಿ ಅತ್ಯಂತ ಸೂಕ್ಷ್ಮ ರಚನೆಯಿಂದ ಕಣ್ಣಿಗೆ ಕಾಣಿಸುವ ರಚನೆಯನ್ನು ಅಭ್ಯಸಿಸುವ ಅಂಗರಚನಾಶಾಸ್ತ್ರದ ವಿಭಾಗಕ್ಕೆ (ಆಸ್ಟಿಯಾಲಜಿ) ಎನ್ನುತ್ತಾರೆ. ಇಲ್ಲಿ ಮುಖ್ಯವಾಗಿ ಮೂಳೆಗಳ ರೂಪ, ಆಕಾರ, ಗಾತ್ರ, ಬೆಳೆವಣಿಗೆಯ ಕ್ರಮ, ಇತರ ಊತಕಗಳೊಂದಿಗಿರುವ ಸಂಬಂಧ, ನಿಜಗೆಲಸಗಳನ್ನು ವಿವರಿಸಲಾಗಿದೆ.
(ನೋಡಿ- ಎಲಬು)
(ನೋಡಿ- ಎಲುಗಟ್ಟು,-ಕಶೇರುಕಗಳ)								
(ಡಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ